ಬೆಂಗಳೂರು,ಜನವರಿ 15: ಹೊಟ್ಟೆ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಆಸ್ವತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು.
ಬನ್ನೇರುಘಟ್ಟ ರಸ್ತೆಯಲ್ಲಿರುವ ಸಾಗರ್ ಅಪಲೊ ಆಸ್ವತ್ರೆಗೆ ಇಂದು ಬೆಳಿಗ್ಗೆ ದಾಖಲಾದ ಮುಖ್ಯಮಂತ್ರಿಗಳು ಚಿಕಿತ್ಸೆ ನಂತರ ಸಂಜೆ ಆಸ್ವತ್ರೆಯಿಂದ ಮನೆಗೆ ಮರಳಿದರು.
ಕಳೆದ ಬುಧವಾರ ಮೂರು ದಿನಗಳ ವಿಶ್ರಾತಿಗೆಂದು ಕೇರಳಕ್ಕೆ ತೆರಳಿದ್ದ ಮುಖ್ಯಮಂತ್ರಿಗಳು ಅಲ್ಲಿನ ಆಹಾರದಲ್ಲಿ ವ್ಯತ್ಯಾಸವಾದ ಕಾರಣ ಬುಧವಾರ ಸಂಜೆ ನಗರಕ್ಕೆ ವಾಪಸ್ಸಾಗಿ ಸಾಗರ್ ಅಪಲೊ ಅಸ್ವತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ನಿನ್ನೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದಣಿದಿದ್ದ ಮುಖ್ಯಮಂತ್ರಿಗೆಳಿಗೆ ಇಂದು ಬೆಳಿಗ್ಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ವತ್ರೆಗೆ ದಾವಿಸಿದ್ದು, ವೈದ್ಯರ ಸಲಹೆಯ ಮೇರೆಗೆ ಇಡೀ ದಿನ ವಿಶ್ರಾಂತಿ ಪಡೆದರು.